ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂಲಕ ಹರಿಯುವ ಕೆಲವು ನದಿಗಳ ಪಟ್ಟಿ ಇದು. ನದಿಯ ಹೆಸರುಗಳು ಅವು ಹರಿಯುವ ಪ್ರದೇಶವನ್ನು ಅವಲಂಬಿಸಿ ಬದಲಾಗುತ್ತದೆ. ಈ ಜಿಲ್ಲೆಗಳ ಬಹುತೇಕ ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ ಮತ್ತು ಅರೇಬಿಯನ್ ಸಮುದ್ರವನ್ನು ಸೇರುತ್ತವೆ. === ನೇತ್ರಾವತಿ === ನೇತ್ರಾವತಿ ನದಿಯ ಮೂಲ ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳು. ಕುಮಾರಧಾರ, ನೇರಿಯಾರೆ, ಮಣಿಹಳ್ಳ ಮತ್ತು ಗುರುಪುರಾ ನದಿಗಳು ನೇತ್ರಾವತಿ ನದಿಗೆ ಸೇರುತ್ತವೆ. ಮಂಗಳೂರು, ಬಂಟ್ವಾಳ, ಪಾಣೆಮಂಗಳೂರು, ಧರ್ಮಸ್ಥಳ ಮತ್ತು ಉಳ್ಳಾಲ ಈ ನದಿಯ ತೀರದಲ್ಲಿರುವ ಕೆಲವು ಸ್ಥಳಗಳಾಗಿವೆ. ಈ ನದಿ ಮಂಗಳೂರಿನಲ್ಲಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ನೆತ್ರಾವತಿ ನದಿ ದಕ್ಷಿಣ ಕನ್ನಡದ ಜೀವ ನಾಡಿ ಎಂದು ಕರೆಯಲ್ಪಡುತ್ತದೆ. ಇದರ ಉದ್ದವು 103 ಕಿಮೀ. ಇದು ಸುಮಾರು 1352 ಚದರ ಮೈಲುಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ನದಿಯ ನೀರನ್ನು ಕುಡಿಯಲು, ಮೀನುಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸುತ್ತಾರೆ. === ಕುಮಾರಧಾರ === ಕುಮಾರಧಾರ ನದಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. ಈ ನದಿಯು ನೇತ್ರಾವತಿ ನದಿಗೆ ಸೇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕುಮಾರಧಾರ ನದಿ ತೀರದಲ್ಲಿದೆ. === ಗುರುಪುರ ಅಥವಾ ಫಲ್ಗುಣಿ ನದಿ === ಗುರುಪುರ ನದಿಯು ಮಂಗಳೂರಿನ ಗುರುಪುರ ಮೂಲಕ ಹರಿಯುತ್ತದೆ. ಬೆಂಗ್ರೆಯ ಬಳಿ ನೇತ್ರಾವತಿ ನದಿಯನ್ನು ಸೇರುತ್ತದೆ. === ನಂದಿನಿ ಅಥವಾ ಪಾವಂಜೆ === ನಂದಿನಿ ಅಥವಾ ಪಾವಂಜೆ ನದಿ ಸಸಿಹಿತ್ಲು ಬಳಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಇದು ಕನಕಾಗಿರಿ(ಇರುವೈಲು)ನಲ್ಲಿ ಹುಟ್ಟುತ್ತದೆ. ಕಟೀಲು ಹಾಗೂ ಪಾವಂಜೆ ಮೂಲಕ ಹರಿಯುತ್ತದೆ. === ಶಾಂಭವಿ === ಶಾಂಭವಿ ನದಿ ಮುಲ್ಕಿ ಪಟ್ಟಣದ ಮೂಲಕ ಹರಿಯುತ್ತದೆ. === ಪಾಂಗಳ === ಈ ನದಿಯು ಪಂಗಳ ಗ್ರಾಮವನ್ನು ಮುಟ್ಟುತ್ತದೆ ಮತ್ತು ಮಟ್ಟಿ ಬಳಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. === ಉದ್ಯಾವರ === ಉದ್ಯಾವರ ನದಿಯು ಮಲ್ಪೆ ಬಳಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಉದ್ಯಾವರ ಮತ್ತು ಮಲ್ಪೆ ಈ ನದಿಯು ಹರಿಯುವ ಕೆಲವು ಸ್ಥಳಗಳಾಗಿವೆ. === ಸ್ವರ್ಣ ಅಥವಾ ಸುವರ್ಣ === ಸ್ವರ್ಣ ನದಿಪರ್ವೂರ್, ಹಿರಿಯಾಡ್ಕ, ಪರಿಕ (ಉದ್ಯಾನ) ಹರ್ಗ, ಮಣಿಪಾಲ್, ಪೆರಾಂಪಳ್ಳಿ, ಉಪ್ಪೂರ್ ಮತ್ತು ಕಲ್ಯಾಣಪುರ ಮೂಲಕ ಬೆಂಗ್ರೆಯಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಏ ನದಿಯು ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. === ಸೀತಾ === ನರಸಿಂಹ ಪರ್ವತದ ಮೇಲಿರುವ ಹೆಬ್ರಿಯ ಬಳಿ ಪಶ್ಚಿಮ ಘಟ್ಟಗಳಲ್ಲಿ ಈ ನದಿಯು ಹುಟ್ಟುತ್ತದೆ. ಈ ನದಿ ಉಡುಪಿ ತಾಲ್ಲೂಕಿನ ಮೂಲಕ ಹರಿಯುತ್ತದೆ. ಪ್ರಸಿದ್ಧ ಪಟ್ಟಣ ಬಾರ್ಕೂರು ಸೀತಾ ನದಿಯ ದಡದಲ್ಲಿದೆ. == ಉಲ್ಲೇಖಗಳು ==